ಕನ್ನಡದಲ್ಲಿ ನೀರಿನ ಮಾಲಿನ್ಯದ ಕುರಿತು ಪ್ರಬಂಧ – Essay On Water Pollution In Kannada

ಹಲೋ ವಿದ್ಯಾರ್ಥಿಗಳೇ, ನಾವು ಇಲ್ಲಿ ಬರೆದಿದ್ದೇವೆ Essay On Water Pollution In Kannada ಈ ಪ್ರಬಂಧವು ವಿದ್ಯಾರ್ಥಿಯ ಪರೀಕ್ಷೆಯಲ್ಲಿ ತುಂಬಾ ಸಹಾಯಕವಾಗುತ್ತದೆ. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಈ ಪ್ರಬಂಧವನ್ನು ಸಿದ್ಧಪಡಿಸಲಾಗಿದೆ.

Essay On Water Pollution In Kannada Language

ಜಲ ಮಾಲಿನ್ಯ ಎಂದರೇನು?

ನೀರಿನಲ್ಲಿ ಉಂಟಾಗುವ ಭೌತಿಕ ಜೈವಿಕ ಮತ್ತು ರಾಸಾಯನಿಕ ಬದಲಾವಣೆಯನ್ನು ಜಲಮಾಲಿನ್ಯ (Water Pollution) ಎಂದು ಕರೆಯುತ್ತಾರೆ.

ಸರಳವಾಗಿ ಹೇಳಬೇಕೆಂದರೆ ಮಾನವನ ಚಟುವಟಿಕೆಗಳಿಂದ ನೀರಿನ ಮೂಲಗಳು ಕಲುಷಿತ ಗೊಳ್ಳುವುದೇ ಜಲಮಾಲಿನ್ಯವಾಗಿದೆ.

ನೀರಿನ ಮಾಲಿನ್ಯ ಎಂದರೇನು ಎಂಬುದು ಗೊತ್ತಾಯಿತು. ಆದರೆ ಇದು ಹೇಗೆ ಉಂಟಾಗುತ್ತದೆ? ಎನ್ನುವ  ಪ್ರಶ್ನೆ ನಮ್ಮದು. ಬನ್ನಿ ಅದನ್ನೇ ನೋಡೋಣ.

ಜಲ ಮಾಲಿನ್ಯ ಹೇಗೆ ಉಂಟಾಗುತ್ತದೆ?

ನೀರಿನಲ್ಲಿ ಹಲವಾರು ರಾಸಾಯನಿಕಗಳು, ಸೂಕ್ಷ್ಮಾಣು ಜೀವಿಗಳು (ಕೊಳೆತ ಪದಾರ್ಥಗಳಿಂದ ಹುಟ್ಟಿದ), ಕಾರ್ಖಾನೆ-ಕೈಗಾರಿಕೆಗಳಿಂದ ಮತ್ತು ನಗರಗಳಿಂದ ಹೊರಬರುವ ತಾಜ್ಯವು ನೀರಿನಲ್ಲಿ ಬೆರೆತಾಗ ಜಲಮಾಲಿನ್ಯ ಉಂಟಾಗುತ್ತದೆ.

ಈ ತಾಜ್ಯಗಳು, ಹಳ್ಳ, ಕೆರೆ, ನದಿ, ಸರೋವರ ಹಾಗೂ ಸಾಗರಗಳಂತಹ ನೀರಿನ ಮೂಲಗಳಿಗೆ (ಆಕರಗಳು) ಬೆರೆತುಕೊಳ್ಳುತ್ತವೆ. ಅಲ್ಲಿ ಕೆಲವು ವಸ್ತುಗಳು ಅಥವಾ ತಾಜ್ಯ ಪದಾರ್ಥಗಳು ವಿಘಟನೆಗೊಳ್ಳುತ್ತವೆ.

ಇದು ಸಾವಿರಾರು ಸೂಕ್ಷ್ಮಾಣು ಜೀವಿಗಳು ಹುಟ್ಟಿವಿಕೆಗೆ ಕಾರಣವಾಗಿ, ಬಳಕೆಗೆ ಅನುಪಯುಕ್ತ ನೀರಾಗಿ ರೂಪಗೊಳ್ಳುತ್ತದೆ.

ಈ ನೀರಿನಲ್ಲಿ ಬೆರೆತ ಪದಾರ್ಥಗಳು ಮಾಲಿನ್ಯಕಾರಕಗಳಾಗಿ ಮಾರ್ಪಾಡುಗೊಳ್ಳುತ್ತವೆ.

ಈ ರೀತಿ ಉಂಟಾಗುವ ಜಲಮಾಲಿನ್ಯಕ್ಕೆ ವಿಧಗಳು ಇರಬಹುದಲ್ವಾ?

ಜಲ ಮಾಲಿನ್ಯದ ವಿಧಗಳು

ಜಲ ಮಾಲಿನ್ಯವನ್ನು ಪ್ರತ್ಯಕ್ಷ ಮತ್ತು ಪರೋಕ್ಷ ಮೂಲ ಮಾಲಿನ್ಯಗಳೆಂದು ಎರಡು ಮುಖ್ಯ ವಿಧಗಳನ್ನಾಗಿ ವಿಂಗಡಿಸಬಹುದು.

ಆದರೆ ನಾವು ಇಲ್ಲಿ ಅವುಗಳನ್ನು ಪ್ರತ್ಯೇಕವಾಗಿ ನೋಡೋಣ.

Types of water pollution in Kannada as given below.

1. ಅಂತರ್ಜಲ ಮಾಲಿನ್ಯ (Groundwater Pollution ):
ಮಾಲಿನ್ಯಕಾರಕಗಳು ಭೂಮಿಯ ಒಳಗೆ ಹೇಳಿದಾಗ ಅಥವಾ ಭೂಮಿಯ ಒಳಗಡೆ ಸಂಗ್ರಹವಾಗಲು ಶುರುವಾದಾಗ, ಇವುಗಳು ಅಂತರ್ಜಲ ದೊಡನೆ ಕೂಡಿಕೊಂಡು ಅಂತರ್ ಜಲ ಮಾಲಿನ್ಯವನ್ನು ಉಂಟು ಮಾಡುತ್ತವೆ.

ಇದು ಸ್ವಾಭಾವಿಕವಾಗಿ ಆದರೂ ಆಗಬಹುದು ಮತ್ತು ಕೃತಕವಾಗಿಯೂ ಆಗಬಹುದು.
ಕಾರಣಗಳು:

  • ನೈಸರ್ಗಿಕ ಕಾರಣಗಳು
  • ರಸಗೊಬ್ಬರಗಳು ಮತ್ತು ಕೀಟನಾಶಕಗಳು
  • ಒಳಚರಂಡಿ ತಾಜ್ಯಗಳು
  • ವಾಣಿಜ್ಯ ಮತ್ತು ಕೈಗಾರಿಕಾ ಸೋರಿಕೆಗಳು
  • ಇತ್ಯಾದಿ

2. ರಾಸಾಯನಿಕ ಜಲಮಾಲಿನ್ಯ (Chemical Pollution):
ಕೈಗಾರಿಕೆಗಳ ಕೆಲಸದಿಂದ ಹೊರಬರುವಂತಹ ಹಲವಾರು ದ್ರವರೂಪದಲ್ಲಿರುವ ರಾಸಾಯನಿಕಗಳು ನದಿಗಳಿಗೆ ಸರೋವರಗಳಿಗೆ ಸೇರಿನ ನೀರನ್ನು ಕಲುಷಿತಗೊಳಿಸುತ್ತವೆ.

ಈ ರಾಸಾಯನಿಕಗಳು ನದಿಯ ನೀರಿನಲ್ಲಿರುವ ಹಲವಾರು ಜಲಚರಗಳ ಬೆಳವಣಿಗೆಗೆ ಅಥವಾ ಜೀವನಚಕ್ರಕ್ಕೆ ವಿಷವಾಗಿ ಪರಿಣಮಿಸಿ ಅವುಗಳ ನಾಶಕ್ಕೆ ಕಾರಣವಾಗುತ್ತದೆ.

ಅದೇ ರೀತಿ ಕೃಷಿಗೆ ಬಳಸಿದ, ಕೀಟ ನಾಶಕಗಳು, ಗೊಬ್ಬರಗಳು ಮತ್ತು ಕಳೆನಾಶಕಗಳ ಹರಿವು ನೀರಿನ ಮೂಲಗಳಿಗೆ ಸೇರುತ್ತದೆ.

ಇಂತಹ ನೀರಿನಲ್ಲಿ ಬೆಳೆದ ಮೀನುಗಳನ್ನು ಪ್ರಾಣಿ, ಪಕ್ಷಿ ಅಥವಾ ಮನುಷ್ಯರು ಸೇವಿಸಿದರೆ ಇದು ಮನುಷ್ಯರಿಗೂ ವಿಷಪೂರಿತ ವಾಗಬಹುದು.

ಸಮುದ್ರದ ಮೂಲಗಳಲ್ಲಿ ಪೆಟ್ರೋಲಿಯಂ ತೈಲ ಸೋರಿಕೆಯಾದಾಗ, ಪೆಟ್ರೋಲಿಯಂ ಸುಮಾರು ಮೈಲುಗಳಷ್ಟು ಹರಡಿ, ಮೀನುಗಳ ಮತ್ತು ಸ್ಥಳೀಯ ವನ್ಯಜೀವಿಗಳ ಸಾವಿಗೆ ಕಾರಣವಾಗಬಹುದು.

ಅದಲ್ಲದೆ ಪಕ್ಷಿಗಳ ಗರಿಗಳಿಗೆ ಅಂಟಿಕೊಂಡರೆ ಅವುಗಳು ಹಾರಾಟದ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತವೆ.

3. ಸೂಕ್ಷ್ಮಜೀವಿ ಮಾಲಿನ್ಯ (Microbial Water Pollution):
ಸೂಕ್ಷ್ಮಜೀವಿ ಜಲ ಮಾಲಿನ್ಯವು ನೈಸರ್ಗಿಕ ಜಲಮಾಲಿನ್ಯವಾಗಿದ್ದು ಇದು ನೀರಿನಲ್ಲಿರುವ ಸೂಕ್ಷ್ಮಜೀವಿಗಳಿಂದ ಉಂಟಾಗುತ್ತದೆ.

ಈ ಸೂಕ್ಷ್ಮಜೀವಿಗಳು ಮೀನುಗಳ, ಪ್ರಾಣಿಗಳ ಮತ್ತು ಮನುಷ್ಯರ ಆರೋಗ್ಯವನ್ನು ನೀರಿನ ಮುಖಾಂತರ ಹಾನಿಯನ್ನು ಉಂಟುಮಾಡುತ್ತವೆ.

ಬ್ಯಾಕ್ಟೀರಿಯ, ವೈರಸ್ ಗಳು, ಶೈವಲ ಮತ್ತು ಶಿಲಿಂದ್ರಗಳಂತಹ ನೀರಿನಲ್ಲಿರುವ ಸೂಕ್ಷ್ಮಜೀವಿಗಳು ಕಾಲರಾಗಳಂತಹ ಕಾಯಿಲೆಗಳಿಗೆ ಕಾರಣವಾಗುತ್ತವೆ.

4. ಮೇಲ್ಮೈ ಜಲ ಮಾಲಿನ್ಯ (Surface Water Of Pollution):
ಪ್ಲಾಸ್ಟಿಕ್ ಗಳು, ಕೃಷಿ ರಾಸಾಯನಿಕಗಳು, ಆಸ್ಪತ್ರೆಗಳಿಂದ ವಿಲೇವಾರಿ ಮಾಡುವ ತಾಜ್ಯಗಳು, ಗಣಿಗಾರಿಕೆ, ಭೂಕುಸಿತಗಳು ಹಾಗೂ  ಮಾನವನ/ಪ್ರಾಣಿಗಳ ತಾಜ್ಯ ಇವುಗಳು ಜಲ ಮಾಲಿನ್ಯಕ್ಕೆ ಕಾರಣಗಳಾಗಿ ಪರಿಣಮಿಸುತ್ತವೆ.

ಇಲ್ಲಿವರೆಗೆ ನಾವು ಜಲ ಮಾಲಿನ್ಯ ವಿಧಗಳನ್ನು ತಿಳಿದುಕೊಂಡೆವು. ಆದರೆ ಇದಕ್ಕೆ ಮುಖ್ಯ ಕಾರಣಗಳು ಗೊತ್ತಾಗಲಿಲ್ಲ ಅಲ್ವಾ?
ಈ ಕೆಳಗಿವೆ ನೋಡಿ.

ಜಲಮಾಲಿನ್ಯಕ್ಕೆ ಮುಖ್ಯ ಕಾರಣಗಳು

Causes of water pollution In Kannada:

  1. ನಗರೀಕರಣ
  2. ಅರಣ್ಯ ನಾಶ
  3. ಕೈಗಾರಿಕ ತಾಜ್ಯಗಳು
  4. ಸಾಮಾಜಿಕ ಮತ್ತು ಧಾರ್ಮಿಕ ಆಚರಣೆಗಳು
  5. ರಸಗೊಬ್ಬರಗಳ ಮತ್ತು ಮಾರ್ಜಕಗಳ ಬಳಕೆ
  6. ಕೃಷಿಗೆ ಬಳಸಿದ ಕೀಟನಾಶಕಗಳ ಹರಿಯುವಿಕೆ
  7. ಅಪಘಾತಗಳು( ತೈಲ ಸೋರಿಕೆ, ಪರಮಾಣು ವಿಕಿರಣಗಳು)

ಇವೆಲ್ಲ ಕಾರಣಗಳಿಂದ ಉಂಟಾಗುವ ಜಲಮಾಲಿನ್ಯ, ನಮ್ಮ ಮೇಲೆ ಅಥವಾ ಪರಿಸರದ ಮೇಲೆ ಯಾವ ರೀತಿ ಅಡ್ಡ ಪರಿಣಾಮಗಳನ್ನು ಬೀರುತ್ತದೆ?

ಜಲ ಮಾಲಿನ್ಯದ ಪರಿಣಾಮಗಳು

Effects Of Water Pollution In Kannada:

ಜೀವ ವೈವಿಧ್ಯತೆಯ ನಾಶ (Destruction Of Biodiversity): ಜಲ ಮಾಲಿನ್ಯವು ಜಲವಾಸಿ ಪರಿಸರ ವ್ಯವಸ್ಥೆಯ ಮೇಲೆ ತುಂಬಾ ಅಡ್ಡ ಪರಿಣಾಮ ಬೀರುವುದಲ್ಲದೆ ಫೈಟೋಪ್ಲಾಂಕ್ಟನ್ (Phytoplankton) ಗಳ ಬೆಳವಣಿಗೆಗೆ ಕಾರಣವಾಗುತ್ತದೆ.

ಆಹಾರ ಸರಪಳಿಯ ಮಾಲಿನ್ಯ(Contamination Of The Food Chain): ಕಲುಷಿತ ನೀರಿನಲ್ಲಿ ಮೀನುಗಾರಿಕೆ ಮಾಡುವುದು, ಕೃಷಿ ಮಾಡುವುದು ಮತ್ತು ಮಲಿನಗೊಂಡ ನೀರನ್ನು ಜಾನುವಾರುಗಳ ಸಾಗಾಣಿಕೆಗೆ ಬಳಸುವುದರಿಂದ ಹಲವಾರು ವಿಷಕಾರಿ ಅಂಶಗಳು ಆಹಾರದಲ್ಲಿ ಸೇರ್ಪಡೆಗೊಂಡಿರುತ್ತವೆ. ಇವುಗಳು ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸುತ್ತವೆ.

ಕುಡಿಯುವ ನೀರಿನ ಕೊರತೆ (Lack Of Potable Water): ಸಂಯುಕ್ತ ರಾಷ್ಟ್ರಗಳ (United Nations) ಪ್ರಕಾರ “ವಿಶ್ವದಾದ್ಯಂತ ನೂರಾರು ಕೋಟಿ ಜನರಿಗೆ ಕುಡಿಯಲು ಮತ್ತು ನೈರ್ಮಲ್ಯಕ್ಕೆ ಶುದ್ಧ ನೀರಿನ ಕೊರತೆ ಕಾಡುತ್ತಿದ್ದೂ, ಈ ಸಮಸ್ಯೆಗಳು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು”.

ರೋಗಗಳು (Diseases): WHO ದ ಪ್ರಕಾರ ಜಲ ಮಾಲಿನ್ಯದಿಂದ, ಪ್ರತಿವರ್ಷ ವಿಶ್ವದಾದ್ಯಂತ 485000 ಜನ, ಕಾಲರಾ, ಬೇದಿ, ಟೈಫಾಯ್ಡ್ ಮತ್ತು ಪೋಲಿಯೋ ಗಳಂತಹ ರೋಗಗಳಿಗೆ ಬಲಿಯಾಗುತ್ತಿದ್ದಾರೆ.

ಶಿಶು ಮರಣ (Infant mortality):
ಕಲುಷಿತ ನೀರನ್ನು ಕುಡಿಯಲಿಕ್ಕೆ, ಅಡುಗೆ ಮಾಡಲಿಕ್ಕೆ ಮತ್ತು ಸ್ವಚ್ಛಗೊಳಿಸಲು ಬಳಸುವುದರಿಂದ ವಿಶ್ವದಾದ್ಯಂತ ದಿನಕ್ಕೆ 1,000 ಮಕ್ಕಳು ಅತಿಸರಾ(Diarrhoeal) ರೋಗಕ್ಕೆ ಬಲಿಯಾಗುತ್ತಿದ್ದಾರೆ.

ನದಿಗಳ ಮಾಲಿನ್ಯ

1. ಗಂಗಾ ನದಿ

ನದಿಗಳ ಮಾಲಿನ್ಯ ಎಂದಾಕ್ಷಣ ಭಾರತದಲ್ಲಿ ನಮಗೆ ನೆನಪಿಗೆ ಬರುವುದು ನಮ್ಮ ಗಂಗಾನದಿ.
ಆರ್ಥಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿರುವ ಗಂಗಾನದಿಯನ್ನು ವಿಶ್ವದ ಹೆಚ್ಚು ಕಲುಷಿತ ನದಿಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ.

500 ಮಿಲಿಯನ್ ಜನರಿಗೆ ಶುದ್ಧ ನೀರನ್ನು ಕೊಡುತ್ತಿದ್ದ ಗಂಗೆ, ಇವತ್ತು ವಿಶ್ವದ ಕಲುಷಿತ ನದಿಗಳಲ್ಲಿ ಒಂದಾಗಿದೆ ಅಂದರೆ ಎಷ್ಟರಮಟ್ಟಿಗೆ ಕಲುಷಿತಗೊಂಡಿದೆ ಎಂಬುದನ್ನು ನೀವೇ ಲೆಕ್ಕ ಹಾಕಿ

ಹೆಚ್ಚು ಕೈಗಾರೀಕರಣಗೊಂಡ ನಗರಗಳಾದ ಕಾನ್ಪುರ್, ಅಲಹಾಬಾದ್, ವಾರಣಾಸಿ ಮತ್ತು ಪಾಟ್ನಾ ದಿಂದ ಗಂಗಾ ನದಿಗೆ ಸೇರುವ ಮಲ ಮತ್ತು ಕೈಗಾರಿಕಾ ತಾಜ್ಯಗಳು ಗಂಗೆಯ ಈ ಕಲುಷಿತಕ್ಕೆ ಮುಖ್ಯ ಕಾರಣಗಳಾಗಿ ಕಂಡುಬರುತ್ತವೆ.

ನಮಾಮಿ ಗಂಗೆ (Namami Gange Program):
ಗಂಗಾ ನದಿಯ ಮಾಲಿನ್ಯವನ್ನು ತಡೆಗಟ್ಟುವ ಉದ್ದೇಶದಿಂದ, ಜುಲೈ 2014 ರಂದು ಭಾರತ ಸರ್ಕಾರವು 20000 ಕೋಟಿ ರೂಪಾಯಿ ಮೌಲ್ಯದ ಬಜೆಟ್ ನ್ನು ಮೀಸಲಿಡುವುದರ ಮೂಲಕ ಒಂದು ಮಹತ್ವದ ಹೆಜ್ಜೆಯನ್ನು ಇಟ್ಟಿತು.

ಗಂಗಾ ನದಿ ಅಭಿವೃದ್ಧಿ ಮತ್ತು ಪುನರಾಭಿವೃದ್ಧಿ ಕಾರ್ಯಕ್ಕಾಗಿ ಜಲಸಂಪನ್ಮೂಲ ಇಲಾಖೆಗೆ 2020-21 ರಲ್ಲಿ 8,960 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ.

2. ನೈಜರ್ ನದಿ (Niger River Delta)
ನೈಜರ್ ಡೆಲ್ಟಾ (Niger Delta) ಇದು ಭೂಮಿಯ ಮೇಲಿನ ಅತಿ ಹೆಚ್ಚು ಮಾಲಿನ್ಯದಿಂದ ಕೂಡಿದ ಪ್ರದೇಶವಾಗಿದೆ.

ನೈಜರ್ ಡೆಲ್ಟಾ ಪ್ರದೇಶವು ಆಫ್ರಿಕಾದಲ್ಲಿ ಅತಿ ಹೆಚ್ಚು ತೈಲ ಉತ್ಪಾದನಾ ಸ್ಥಳವಾಗಿದೆ. ದಶಮಾನಗಳಿಂದಲೂ ತೈಲ ಸೋರಿಕೆಯೂ ಇಲ್ಲಿನ ಮಾಲಿನ್ಯಕ್ಕೆ ಮುಖ್ಯ ಕಾರಣವಾಗುತ್ತಿದೆ.

ನೈಜರ್ ನದಿಯಲ್ಲಿ 1958 ರಿಂದ ಇಲ್ಲಿಯವರೆಗೆ ಸುಮಾರು 13 ಮಿಲಿಯನ್ ಬ್ಯಾರಲ್ ಕಿಂತ ಹೆಚ್ಚು ತೈಲ ಸೋರಿಕೆಯಾಗಿದೆ.
ಉದಾಹರಣೆ ಕೊಡಬೇಕೆಂದರೆ ಇಂತ ಹಲವಾರು ನದಿಗಳಿವೆ.

ಇಷ್ಟೆಲ್ಲ ಪರಿಣಾಮವನ್ನು ಬೀರುತ್ತಿರುವ  ಜಲ ಮಾಲಿನ್ಯವನ್ನು ನಿಯಂತ್ರಿಸುವುದು ಹೇಗೆ? ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ.

ಈ ರೀತಿಯಲ್ಲ ದುಷ್ಪರಿಣಾಮಗಳನ್ನು ಪರಿಸರದ ಮೇಲೆ ಬೀರುತ್ತಿರುವ ಈ ಜಲಮಾಲಿನ್ಯವನ್ನು ತಡೆಗಟ್ಟುವುದು ಅತಿ ಮುಖ್ಯವಾಗಿದೆ.

ಹಾಗಾದ್ರೆ ಜಲ ಮಾಲಿನ್ಯವನ್ನು ನಿಯಂತ್ರಿಸುವುದು ಹೇಗೆ?

ಜಲ ಮಾಲಿನ್ಯ ತಡೆಗಟ್ಟುವ ಅಂಶಗಳು

Prevention Of Water Pollution In Kannada as follows:

  1. ಪ್ಲಾಸ್ಟಿಕ್ ಅಥವಾ ಪ್ಲಾಸ್ಟಿಕ್ ದಿಂದ ಮಾಡಿದ ವಸ್ತುಗಳನ್ನು ಕಡಿಮೆ ಬಳಸಬೇಕು. ಪ್ಲಾಸ್ಟಿಕ್ ವಸ್ತುಗಳನ್ನು ಉತ್ಪಾದಿಸಿದ ನಂತರ ಇದನ್ನು ವಿಘಟನೆ ಉಳಿಸುವುದು ಬಹಳ ಕಷ್ಟಕಾರಿ. ನಾವು ಬಳಸುವ ಬಹಳಷ್ಟು ಪ್ಲಾಸ್ಟಿಕ್ ವಸ್ತುಗಳು ಕೊನೆಗೆ ನೀರಿನ ಮೂಲಗಳಿಗೆ ಸೇರುವುದರಿಂದ ಇವುಗಳನ್ನು ಹೊರತೆಗೆಯುವುದು ಕಷ್ಟಕರ ಕೆಲಸ
  2. ವಸ್ತುಗಳನ್ನು ಮರುಬಳಕೆ ಮಾಡಬೇಕು.
  3. ಗೃಹಪಯೋಗಿ ವಸ್ತುಗಳನ್ನು ಶೌಚಾಲಯಗಳನ್ನು ನಿಲ್ಲಿಸಬೇಕು.
  4. ಕೆರೆ ನದಿ ಅಥವ ಸರೋವರ ಗಳಿಗೆ ಭೇಟಿ ನೀಡಿದಾಗ ನೀವು ಬಳಸಿದ ವಸ್ತುಗಳನ್ನು ಅಥವಾ ಪ್ಲಾಸ್ಟಿಕ್ ಚೀಲಗಳನ್ನು ಕಸದ ಬುಟ್ಟಿಯಲ್ಲಿ ಹಾಕುವುದು.
  5. ಸಮುದ್ರ ತೀರಗಳು, ನದಿಗಳು ಅಥವಾ ಪ್ರಾದೇಶಿಕ ಸ್ಥಳಗಳನ್ನು ಸ್ವಚ್ಛಗೊಳಿಸಲು ಸ್ವಯಂಸೇವಕರೊಡನೆ ಅಥವಾ ಸ್ವಯಂಸೇವಕರಾಗಿ ಭಾಗಿಯಾಗಿ.
  6. ಬಟ್ಟೆ ಅಥವಾ ಪಾತ್ರೆಗಳನ್ನು ತೊಳೆಯುವಾಗ ಆದಷ್ಟು ಕಡಿಮೆ ಸಾಬೂನುಗಳನ್ನು/ಮಾರ್ಜಕಗಳು) ಬಳಸಿ.
  7. ಫಾಸ್ಪೆಟ್ ಮುಕ್ತ ಸಾಬೂನು/ ಮಾರ್ಜಕಗಳನ್ನು ಮಾತ್ರ ಬಳಸಿ.
  8. ಕೀಟ ನಾಶಕಗಳು, ಕಳೆ ನಾಶಕಗಳು, ಮತ್ತು ರಸಗೊಬ್ಬರಗಳನ್ನು ಬಳಸುವದನ್ನು ಕಡಿಮೆ ಮಾಡಬೇಕು ಅಥವಾ ಪರ್ಯಾಯಗಳನ್ನು ನೋಡಿಕೊಂಡರೆ ಒಳ್ಳೆಯದು.
  9. ವಾಹನಗಳ ತೈಲ ಅಥವಾ Automotive Fluids, Grease, ಹಾಗೂ ಇನ್ನೀತರ ರಾಸಾಯನಿಕಗಳನ್ನು ಚರಂಡಿಯಲ್ಲಿ ವಿಲೇವಾರಿ ಮಾಡಬಾರದು.
  10. ಏಕೆಂದರೆ, ಕೊನೆಗೆ ನದಿಗಳಂತಹ ನೀರಿನ ಮೂಲಗಳಿಗೆ ಸೇರುತ್ತವೆ.
  11. ಮಾತ್ರೆಗಳು, ಮತ್ತು ಇನ್ನೀತರ ಔಷಧಿಗಳನ್ನು ಶೌಚಾಲಯದಲ್ಲಿ ಹಾಕಿ Flush ಮಾಡಬೇಡಿ.
  12. ಒಳಚರಂಡಿ ತಾಜ್ಯವನ್ನು ಜಲಮೂಲಗಳಿಗೆ ಬಿಡುಗಡೆ ಮಾಡುವ ಬದಲು ಅವುಗಳನ್ನು ಸಂಸ್ಕರಿಸುವುದು ಉತ್ತಮ.
  13. ಬಹಳ ವಿಶೇಷವಾದ ಸಸ್ಯ ವಾಟರ್ ಹಯಸಿಂತ್ (Water Hyacinth),  ಕ್ಯಾಡ್ಮಿಯಂ ಗಳಂತಹ ವಿಷಕಾರಿ ರಾಸಾಯನಿಕಗಳನ್ನು ಹೀರಿಕೊಳ್ಳುತ್ತದೆ. ಇಂತಹ ಮಾಲಿನ್ಯ ಕಾರಕಗಳಿಗೆ ಗುರಿಯಾಗುವ ಪ್ರದೇಶಗಳಲ್ಲಿ ಈ ಸಸ್ಯಗಳನ್ನು ಬೆಳೆಸುವುದರಿಂದ ಜಲ ಮಾಲಿನ್ಯವು ಬಹಳಷ್ಟು ಕಡಿಮೆಯಾಗುತ್ತದೆ.
  14. ಕೆಲವು ರಾಸಾಯನಿಕ ವಿಧಾನಗಳಿಂದಲೂ ಜಲಮಾಲಿನ್ಯವನ್ನು ನಿಯಂತ್ರಿಸಬಹುದು.

ಉದಾಹರಣೆಗೆ:

  1. Precipitation
  2. Reverse Osmosis
  3. Coagulation

ಮೇಲಿನವುಗಳೆಲ್ಲ ನಾವು ಪಾಲಿಸಬೇಕಾದ ಕೆಲಸ ಅಥವಾ ಕರ್ತವ್ಯಗಳಾದವು.
ಜಲಮಾಲಿನ್ಯದ ನಿಯಂತ್ರಣಕ್ಕೆ ಸರ್ಕಾರ ಯಾವುದೇ ಕಾನೂನುಗಳನ್ನು ಜಾರಿಗೆ ತಂದಿಲ್ವಾ?

ಜಲ ಮಾಲಿನ್ಯ ನಿಯಂತ್ರಣಾ ಕಾಯ್ದೆಗಳು

Laws regulating water pollution in India:
ಜಲಮಾಲಿನ್ಯವನ್ನು ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ ಭಾರತ ಸರ್ಕಾರವು ಇದನ್ನು ನಿಯಂತ್ರಿಸಲು ಸರ್ಕಾರ ಕೈಗೊಂಡ ಕೆಲವು ಕ್ರಮಗಳು ಈ ಕೆಳಗಿನಂತಿವೆ:

1. ಜಲ ಮಾಲಿನ್ಯ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕಾಯ್ದೆ 1974 (Water prevention and control of pollution act 1974): ಜಲ ಮಾಲಿನ್ಯವನ್ನು ತಡೆಗಟ್ಟುವುದು ಮತ್ತು ಜಲಮೂಲಗಳನ್ನು ಸಂರಕ್ಷಿಸುವುದು ಈ ಕಾಯ್ದೆಯ ಮೂಲ ಉದ್ದೇಶಗಳಾಗಿವೆ.

2. ಜಲ ಸಂರಕ್ಷಣೆ ಮತ್ತು ಜಲ ಮಾಲಿನ್ಯ ನಿಯಂತ್ರಣ  ಕಾಯ್ದೆ, 2003 ( the water prevention and control of pollution Cess Act,2003): ಈ ಕಾಯ್ದೆಯ ಸೆಕ್ಷನ್ 2 ರ ಪ್ರಕಾರ ಯಾವುದೇ ಇಂಡಸ್ಟ್ರಿಗಳು (Industries) ಕೈಗಾರಿಕೆಗಳಿಂದ ತ್ಯಾಜ್ಯವನ್ನು ಹೊರ ಬಿಡುವ ಮುನ್ನ, ತ್ಯಾಜ್ಯವನ್ನು ಸಂಸ್ಕರಿಸುವ ಪ್ರಕ್ರಿಯೆಗಳನ್ನು ಅಳವಡಿಸಬೇಕು.

ಈ ಕಾಯ್ದೆಯ ಸೆಕ್ಷನ್ 3 ರ ಪ್ರಕಾರ, ಕೈಗಾರಿಕೆಗಳು ನಿಗದಿತ ಮಿತಿಗಿಂತ ಕಡಿಮೆ ನೀರನ್ನು ಬಳಸಿಕೊಳ್ಳಬೇಕು.

3. ಇಂಡಿಯನ್ ಪಿನಲ್ ಕೋಡ್: IPC Section 277
4. ಶುದ್ಧ ನೀರಿನ ಹಕ್ಕು (Right to clean water)
5. The River Boards Act, 1956

ಉಪಸಂಹಾರ

ಭಾರತದಲ್ಲಿ ಜಲಮಾಲಿನ್ಯಕ್ಕೆ ಅತಿದೊಡ್ಡ ಕಾರಣ ಸಂಸ್ಕರಿಸದ ಒಳಚರಂಡಿ ಹರಿವು ಮತ್ತು ಕೈಗಾರಿಕಾ ತ್ಯಾಜ್ಯಗಳು. ಮೊದಲು ಇವುಗಳನ್ನು ಕಡಿಮೆ ಮಾಡುವಲ್ಲಿ ಸರ್ಕಾರ ಮತ್ತು ಜನರು ಗಮನಹರಿಸಬೇಕು.

ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ಮೇಲಾಗಿ ಮನುಷ್ಯನಾಗಿ, ಸಾಧ್ಯವಾದಷ್ಟು Reuse, Reducing ಮತ್ತು Recycling ಈ ಮೂರು ಅಗತ್ಯ ಅಂಶಗಳನ್ನು ಪಾಲಿಸಿದರೆ ಜಲ ಮಾಲಿನ್ಯದ ಪ್ರಮಾಣದಲ್ಲಿ ತುಂಬಾ ಇಳಿಕೆಯನ್ನು ಕಾಣಬಹುದು.


FAQs

ಜಲ ಮಾಲಿನ್ಯದ ವಿಧಗಳು ಯಾವುವು?

1. ಅಂತರ್ ಜಲ ಮಾಲಿನ್ಯ
2. ರಾಸಾಯನಿಕ ಜಲ ಮಾಲಿನ್ಯ
3. ಮೇಲ್ಮೈ ಜಲಮಾಲಿನ್ಯ
4. ಸೂಕ್ಷ್ಮ ಜೀವಿಗಳ ಜಲ ಮಾಲಿನ್ಯ
ಹೀಗೆ ಹಲವಾರು ವಿಧಗಳನ್ನಾಗಿ ವಿಭಾಗಿಸಬಹುದು.

ನದಿ ಮಾಲಿನ್ಯವನ್ನು ತಡೆಗಟ್ಟುವ ಕ್ರಮಗಳು ಯಾವುವು?

1. ಕೈಗಾರಿಕೆಗಳ ತಾಜಗಳ ವಿಲೇವಾರಿಯನ್ನು ಸಂಸ್ಕರಿಸುವುದು
2. ಒಳ ಚರಂಡಿಗಳನ್ನು ನದಿಗಳಿಗೆ ನೇರವಾಗಿ ಬಿಡದಿರುವುದು.
3. ಪ್ಲಾಸ್ಟಿಕ್ ವಸ್ತುಗಳನ್ನು ಎಸೆಯದಿರುವುದು.
4. ಶವಗಳ ಬೂದಿಯನ್ನು ನದಿಗೆ ಬಿಡದೇ ಇರುವುದು.
ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ.

ಜಲ ಮಾಲಿನ್ಯವು ಮನುಷ್ಯನ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳು ಯಾವುವು?

ಅಶುದ್ಧ ನೀರನ್ನು ಕುಡಿಯುವುದರಿಂದ ಟೈಫಾಯ್ಡ್, ಕಾಲರಾ, ಕಾಮಾಲೆ, ಶಿಶು ಮರಣ ಮತ್ತು ವಾಂತಿ ಭೇದಿಗಳಂತಹ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ.

ಪ್ಲಾಸ್ಟಿಕ್ ನೀರಿನಲ್ಲಿ ಕರಗಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?

ಬೇರೆ ಬೇರೆ ಪ್ಲಾಸ್ಟಿಕ್ ವಸ್ತುಗಳು ವಿಘಟನೆಯಾಗಲು ಬೇರೆ-ಬೇರೆ ಸಮಯವನ್ನು ತೆಗೆದುಕೊಳ್ಳುತ್ತವೆ. ಉದಾಹರಣೆಗೆ:
1. ಪ್ಲಾಸ್ಟಿಕ್ ಬಾಟಲಿ – 450 ವರ್ಷಗಳು
2. ಪ್ಲಾಸ್ಟಿಕ್ ಸ್ಟ್ರಾ (Straw) – 200 ವರ್ಷಗಳು
3. ಹಲ್ಲು ಉಜ್ಜುವ ಕುಂಚ – 500 ವರ್ಷಗಳು

ಈ ವಿಷಯಕ್ಕಾಗಿ ನೀವು ಕನ್ನಡದಲ್ಲಿ ಸಂಪೂರ್ಣ ಪ್ರಬಂಧವನ್ನು ಪಡೆದುಕೊಂಡಿದ್ದೀರಿ ಎಂದು ನಾನು ಭಾವಿಸುತ್ತೇನೆ. ಈ ಪ್ರಬಂಧಕ್ಕೆ ಸಂಬಂಧಿಸಿದಂತೆ ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ದಯವಿಟ್ಟು ಕೆಳಗಿನ ವಿಭಾಗಕ್ಕೆ ಕಾಮೆಂಟ್ ಮಾಡಿ ನಮ್ಮ ವಿಷಯ ಶಿಕ್ಷಕರು ನಿಮಗೆ ಉತ್ತರಿಸುತ್ತಾರೆ. ನಿಮ್ಮ ಪರೀಕ್ಷೆಯಲ್ಲಿ ನೀವು ಉತ್ತಮ ಅಂಕಗಳನ್ನು ಗಳಿಸಿದ್ದರಿಂದ ಸಂಪೂರ್ಣ ಪರಿಹಾರಗಳನ್ನು ನೀಡಲು ನಾವು ನಮ್ಮ ಅತ್ಯುತ್ತಮ ಪ್ರಯತ್ನ ಮಾಡಿದ್ದೇವೆ.

ಶುಭವಾಗಲಿ !!

Leave a Comment

Your email address will not be published. Required fields are marked *