Essay On Noise Pollution In Kannada

Noise Pollution In Kannadaಪೀಠಿಕೆ

ಶಬ್ದ ಮಾಲಿನ್ಯವು ಒಂದು ವಿಧದ ಪರಿಸರ ಮಾಲಿನ್ಯವಾಗಿದ್ದು, ಇತ್ತೀಚಿನ ದಿನಗಳಲ್ಲಿ ಇದು ತುಂಬಾ ಮಾರಕವಾಗಿ ಪರಿಣಮಿಸುತ್ತಿದೆ.

ಶಬ್ದ ಮಾಲಿನ್ಯವು ಹೆಚ್ಚುತ್ತಿದ್ದು ಜೀವಿಸಲು ಅಸುರಕ್ಷಿತ  ವಾತಾವರಣವನ್ನು ಸೃಷ್ಟಿಸುತ್ತಿದೆ.

ಶಬ್ದದ ಮಟ್ಟವು ಸಾಮಾನ್ಯ ಮಟ್ಟವನ್ನು ಮೀರಿದಾಗ ಅದು ಜೀವಿಗಳಿಗೆ ಅಪಾಯಕಾರಿಯಾಗುತ್ತದೆ.

ಅಹಿತಕರ ಶಬ್ದಗಳು ಹಲವಾರು ಅಡಚಣೆಗಳನ್ನು ಉಂಟುಮಾಡುವುದಲ್ಲದೆ ಪರಿಸರದಲ್ಲಿ ಅಸಮತೋಲನವನ್ನು ಸೃಷ್ಟಿ ಮಾಡುತ್ತವೆ.

ವಿಷಯದ ವಿವರಣೆಯನ್ನು ಈ ಕೆಳಗೆ ನೋಡೋಣ.

ನೆನಪಿರಲಿ: ಶಬ್ದಕ್ಕೂ ಮತ್ತು ಧ್ವನಿಗೂ ವ್ಯತ್ಯಾಸವಿದೆ.


Noise Pollution In Kannada Language

ಶಬ್ದ ಎಂದರೇನು?

ಬೇಡದ, ಅಹಿತಕರ, ಜೋರಾದ ಅಥವಾ ಕೇಳಲು ಅಡಚಣೆಯನ್ನು ಉಂಟು ಮಾಡುವ ಧ್ವನಿಯನ್ನು ಶಬ್ದ ಎನ್ನುತ್ತೇವೆ.

ಆದರೆ,
ಧ್ವನಿಯು ಕೇಳಲು ಆಹ್ಲಾದಕರವಾಗಿದ್ದು ಒಂದು ಅರ್ಥಪೂರ್ಣ ಸಂವಹನಕ್ಕೆ ಸಹಾಯವಾಗುತ್ತದೆ.

ವೈಜ್ಞಾನಿಕವಾಗಿ ಶಬ್ದ ಮತ್ತು ಧ್ವನಿಯನ್ನು ಬೇರೆ-ಬೇರೆ ರೀತಿಯಾಗಿ ವ್ಯಾಖ್ಯಾನಿಸಲಾಗುತ್ತದೆ.

ಶಬ್ದ ಮಾಲಿನ್ಯ ಎಂದರೇನು?

ಮಾನವರ ಅಥವಾ ಇತರ ಜೀವಿಗಳಿಗಳ ಮೇಲೆ ಕೆಟ್ಟ ಪರಿಣಾಮವನ್ನು ಬೀರುವ ಹೆಚ್ಚಿನ ಧ್ವನಿಯ ಮಟ್ಟವನ್ನು ಅಥವಾ ಶಬ್ದದ ತೀವ್ರತೆಯನ್ನು ಶಬ್ದ ಮಾಲಿನ್ಯ ಎನ್ನುವರು.

ವಿಶ್ವ ಆರೋಗ್ಯ ಸಂಸ್ಥೆ(W.H.O)ಯ ಪ್ರಕಾರ, ಶಬ್ದ ಮಾಲಿನ್ಯವು  65dB ಗಳಿಗಿಂತ ಹೆಚ್ಚಿನ ಶಬ್ದವಾಗಿದ್ದು, ಇದು ಮಾನವನ ಮತ್ತು ಪ್ರಾಣಿಗಳ ಮೇಲೆ ತೀವ್ರ ಪರಿಣಾಮವನ್ನು ಬೀರಬಹುದು.

75dB ಗಳಿಗಿಂತ ಹೆಚ್ಚಿನ ಶಬ್ದವು ಮಾನವನ ಮೇಲೆ ತೀವ್ರ ಪರಿಣಾಮವನ್ನು ಬೀರುವುದಲ್ಲದೇ ತುಂಬಾ ಹಾನಿಕಾರಕ ಮತ್ತು ನೋವಿನಿಂದ ಕೂಡಿರುತ್ತದೆ.

ಸರಳವಾಗಿ ಹೇಳಬೇಕೆಂದರೆ, 65dB ಗಳಿಗಿಂತ ಹೆಚ್ಚಿನ ಶಬ್ದವನ್ನು  ಶಬ್ದ ಮಾಲಿನ್ಯ (Noise Pollutio) ಎಂದು ಕರೆಯಲಾಗುತ್ತದೆ.


ಶಬ್ದ ಮಾಲಿನ್ಯಕ್ಕೆ ಕಾರಣಗಳು

ಶಬ್ದ ಮಾಲಿನ್ಯಕ್ಕೆ ಹಲವಾರು ಕಾರಣಗಳಿವೆ ಆದರೆ ಕೆಲವು ಮುಖ್ಯವಾದವುಗಳನ್ನು ಇಲ್ಲಿ ನೀಡಲಾಗಿದೆ.

1. ಕೈಗಾರೀಕರಣ

ಹೆಚ್ಚಿನ ಕೈಗಾರಿಗಳು ದೊಡ್ಡ-ದೊಡ್ಡ ಯಂತ್ರೋಪಕರಣಗಳನ್ನು ಬಳಸುತ್ತವೆ. ಜನರೇಟರುಗಳು, ಸಂಕೋಚಕಗಳು ಹಾಗೂ ನಿಷ್ಕಾಸ Fan ಗಳಂತಹ ವಿವಿಧ ಯಂತ್ರಗಳು ಅತಿ ಹೆಚ್ಚು ಪ್ರಮಾಣದ ಶಬ್ದವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ.

ಇಂತಹ ಶಬ್ದದ ಪರಿಣಾಮವನ್ನು ಕಡಿಮೆ ಮಾಡಲು, ಕಾರ್ಖಾನೆ ಮತ್ತು ಕೈಗಾರಿಕೆಗಳಲ್ಲಿ ಕಾರ್ಮಿಕರು Ear Plug ಗಳನ್ನು ಧರಿಸಿರುವುದನ್ನು ನೀವು ಗಮನಿಸಿರಬಹುದು.

ಇಂತಹ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡರೂ, ಹೆಚ್ಚಿನ ತೀವ್ರತೆಯ ಶಬ್ದದ ವಾತಾವರಣದಲ್ಲಿ ದೀರ್ಘಾವಧಿಯವರೆಗೆ ಕೆಲಸ ಮಾಡಿದ್ದಲ್ಲಿ ಶ್ರವಣ ಸಾಮರ್ಥ್ಯವು ಕಡಿಮೆಯಾಗುತ್ತದೆ.

2. ಸಾರಿಗೆ

ರಸ್ತೆಗಳ ಮೇಲಿನ ಅತಿ ಹೆಚ್ಚು ಸಂಖ್ಯೆಯ ವಾಹನಗಳು, ಮನೆಗಳ ಮೇಲೆ ಹಾರುವ ವಿಮಾನಗಳು ಹಾಗೂ Under Ground ರೈಲುಗಳು ಅತಿ ಹೆಚ್ಚು ಶಬ್ದವನ್ನು ಉಂಟುಮಾಡುತ್ತವೆ.

ಜನರು ಅಂತಹ ಶಬ್ದಕ್ಕೆ ಒಗ್ಗಿಕೊಳ್ಳುವುದು ತುಂಬಾ ಅಪಾಯಕಾರಿಯಾಗಿದೆ.

ಇಂತಹ ಹೆಚ್ಚಿನ ಶಬ್ದವು ಸಾಮಾನ್ಯ ವ್ಯಕ್ತಿಗೆ ಕಿವಿ ಕೇಳುವ ಸಾಮರ್ಥ್ಯವನ್ನು ಕಳೆದುಕೊಳ್ಳುವ ಪರಿಸ್ಥಿತಿಗೆ ತಂದೊಡ್ಡುತ್ತದೆ.

3. ನಿರ್ಮಾಣ ಚಟುವಟಿಕೆಗಳು

ಕಟ್ಟಡ ನಿರ್ಮಾಣ, ಸೇತುವೆಗಳ ನಿರ್ಮಾಣ, ಆಣೆಕಟ್ಟುಗಳು, ನಿಲ್ದಾಣಗಳು ಹಾಗೂ ರಸ್ತೆಗಳಂತಹ ನಿರ್ಮಾಣ ಕಾರ್ಯಗಳು ಪ್ರಪಂಚದ ಪ್ರತಿಯೊಂದು ಭಾಗದಲ್ಲಿ ನಡೆಯುತ್ತವೆ.

ನಾವು ಹೆಚ್ಚಿನ ಜನರಿಗೆ ಅವಕಾಶ ಕಲ್ಪಿಸ ಬೇಕಾಗಿರುವುದರಿಂದ ಇಂತಹ ನಿರ್ಮಾಣ ಕಾರ್ಯಗಳು ನಡೆಸಬೇಕಾಗುತ್ತದೆ.

ಆದರೆ ಇವುಗಳಿಂದಾಗುವ ಕೆಲವು ಅಡ್ಡಪರಿಣಾಮಗಳನ್ನು ಲೆಕ್ಕಿಸದೇ ಇರುವಂತಿಲ್ಲ.

ದೀರ್ಘಾವಧಿಯವರೆಗೆ ನಡೆಯುವ ನಿರ್ಮಾಣ ಚಟುವಟಿಕೆಗಳಿಂದ ಬರುವ ಶಬ್ದವನ್ನು, ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿರುವ ಕಾರ್ಮಿಕರು, ಕಾರ್ಯದ ಸ್ಥಳದ ಪಕ್ಕದಿಂದ ಪ್ರಯಾಣಿಸುವ ಜನಸಾಮಾನ್ಯರು ಅಥವಾ  ನಿರ್ಮಾಣ ಚಟುವಟಿಕೆಯ ಪಕ್ಕದ ಮನೆಯವರು ಈ ಶಬ್ದದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

ದೀರ್ಘಾವಧಿಯ ಈ ಶಬ್ದವು ಜನರ ಅಥವಾ ಪ್ರಾಣಿಗಳ ಶ್ರವಣ ಸಾಮರ್ಥ್ಯವನ್ನು ಕ್ಷಿಣಿಸುತ್ತದೆ.

4. ಸಾಮಾಜಿಕ ಚಟುವಟಿಕೆಗಳು

ಮದುವೆ, ಪಾರ್ಟಿಗಳು, ಪಬ್ ಡಿಸ್ಕ್ ಗಳಂತಹ ಸಾಮಾಜಿಕ ಚಟುವಟಿಕೆಗಳು ಅಥವಾ ಕಾರ್ಯಕ್ರಮಗಳಲ್ಲಿ ಧ್ವನಿವರ್ಧಕಗಳ ಶಬ್ದವು ಉತ್ತುಂಗದಲ್ಲಿರುತ್ತದೆ.

ಜನರು ಸಾಮಾನ್ಯವಾಗಿ ಸ್ಥಳೀಯ ಆಡಳಿತದ ನಿಯಮಗಳನ್ನು ಮೀರುವುದಲ್ಲದೆ ಆ ಪ್ರದೇಶದಲ್ಲಿ ತೊಂದರೆ ಉಂಟುಮಾಡುತ್ತಾರೆ.

ಜನರು ಹಾಡುಗಳನ್ನು Full Volume ನಲ್ಲಿಟ್ಟು ನುಡಿಸುವುದಲ್ಲದೆ ಮಧ್ಯರಾತ್ರಿಯವರೆಗೆ ನೃತ್ಯ ಮಾಡುತ್ತಾರೆ. ಇದು ಪಕ್ಕದಲ್ಲಿ ವಾಸಿಸುವ ಜನರ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ.

ಸಂತೆಗಳಲ್ಲಿ ಅಥವಾ ಬಜಾರುಗಳಲ್ಲಿ ಜನರ ಗಮನ ಸೆಳೆಯಲು ಜೋರಾಗಿ ಶಬ್ದ ಮಾಡುವ ಮೂಲಕ ಅಥವಾ ಸಣ್ಣಪುಟ್ಟ ಧ್ವನಿವರ್ಧಕಗಳನ್ನು ಇಟ್ಟುಕೊಂಡು ಬಟ್ಟೆಗಳನ್ನು ಮಾರುವವರನ್ನು ನೀವು ನೋಡಬಹುದು.

5. ಮನೆಗೆಲಸಗಳು

ನಾವೆಲ್ಲರೂ ಟಿ.ವಿ, ಮೊಬೈಲ್, ಮಿಕ್ಸರ್ ಗ್ರೈಂಡರ್, ಪ್ರೆಶರ್ ಕುಕ್ಕರ್, ವ್ಯಾಕ್ಯೂಮ್ ಕ್ಲೀನರ್, ವಾಷಿಂಗ್ ಮಷೀನ್, ಕೂಲರ್ ಮತ್ತು ಏರ್ ಕಂಡಿಷನರ್ ಗಳಂತಹ ಯಂತ್ರೋಪಕರಣಗಳಿಂದ ಸುತ್ತುವರೆದಿದ್ದೇವೆ.

ಇವುಗಳು ಕೂಡ ಶಬ್ದಮಾಲಿನ್ಯಕ್ಕೆ ಸಣ್ಣಪ್ರಮಾಣದಲ್ಲಿ ಕೊಡುಗೆ ನೀಡುತ್ತವೆ.

ವಾಸ್ತವದಲ್ಲಿ ಈ ರೀತಿಯ ಮಾಲಿನ್ಯವು ದುಷ್ಪರಿಣಾಮ ರಹಿತ ಎಂದು ಅನಿಸುತ್ತದೆಯಾದರೂ, ದೂರಗಾಮಿ ಪರಿಣಾಮಗಳನ್ನು ಹೊಂದಿದೆ.

6. ವಾಯು ಸಂಚಾರ (Air Traffic)

ಕೆಲವರಿಗೆ ನಂಬಲು ಕಷ್ಟವಾದರೂ, ವಾಯು ಸಂಚಾರವು ಗಮನಾರ್ಹ ಮಟ್ಟದ ಶಬ್ದಮಾಲಿನ್ಯಕ್ಕೆ ಕಾರಣವಾಗುತ್ತದೆ.
ಒಂದು ವಿಮಾನವು ಸುಮಾರು 130 dB ಗಳಷ್ಟು ತೀವ್ರತೆಯ ಶಬ್ದವನ್ನು ಉಂಟುಮಾಡಬಹುದು.

ಹಾಗಾದರೆ ನಮ್ಮ ವಾಯು ಪ್ರದೇಶದಲ್ಲಿ ಪ್ರಯಾಣಿಸುವ ಹಲವಾರು ವಿಮಾನಗಳಿಂದ ಉತ್ಪತ್ತಿಯಾಗುವ ಶಬ್ದದ ಪ್ರಮಾಣವನ್ನು ನೀವೇ ಊಹಿಸಿ.

7. ಟ್ರಾಫಿಕ್ ಶಬ್ದ

ವಾಹನಗಳ ಟ್ರಾಫಿಕ್ ಶಬ್ದವು ನಗರಗಳಲ್ಲಿ ಹೆಚ್ಚಿನ ಮಾಲಿನ್ಯಕಾರಕ ಶಬ್ದಗಳಿಗೆ ಕಾರಣವಾಗಿದೆ. ಉದಾಹರಣೆಗೆ ಕಾರಿನ ಹಾರ್ನ್ 90db ಶಬ್ದವನ್ನು ಉತ್ಪಾದಿಸುತ್ತದೆ ಮತ್ತು ಬಸ್ಸಿನ ಹಾರ್ನ್ 100db ಶಬ್ದವನ್ನು ಉತ್ಪಾದಿಸಬಲ್ಲದು.

ಈ ಮೇಲಿನವುಗಳು ಶಬ್ದ ಮಾಲಿನ್ಯಕ್ಕೆ ಕೆಲವು ಮುಖ್ಯ ಕಾರಣಗಳಾಗುತ್ತವೆ.

ಹಾಗಾದ್ರೆ ಶಬ್ದ ಮಾಲಿನ್ಯದಿಂದ ಉಂಟಾಗುವ ಪರಿಣಾಮಗಳು ಯಾವುವು ಎಂಬುದನ್ನು ನೋಡೋಣ.

ಶಬ್ದ ಮಾಲಿನ್ಯದ ದುಷ್ಪರಿಣಾಮಗಳು

ಈ ಮಾಲಿನ್ಯವು ಮಾನವನಿಗೆ ಮತ್ತು ಪ್ರಾಣಿಗಳಿಗೆ ಟಿನ್ನಿಟಸ್(Tinnitus) ಮತ್ತು ಕಿವುಡುತನವನ್ನು ಉಂಟುಮಾಡುವ ಮೂಲಕ ಶ್ರವಣ ಸಾಮರ್ಥ್ಯ( ಕಿವಿ ಕೇಳುವ ಸಾಮರ್ಥ್ಯ )ವನ್ನು ಹಾನಿಗೊಳಿಸುತ್ತದೆ.

ಹೆಚ್ಚಿನ ಶಬ್ದವು ಮಾನವನ ಆರೋಗ್ಯವನ್ನು ಅನೇಕ ವಿಧಗಳಲ್ಲಿ ಹಾನಿಗೊಳಿಸಬಹುದು. ವಿಶೇಷವಾಗಿ ಚಿಕ್ಕವರು ಮತ್ತು ವಯಸ್ಸಾದವರಲ್ಲಿ ಇದರ ದುಷ್ಪರಿಣಾಮಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಅವುಗಳಲ್ಲಿ ಮುಖ್ಯವಾದವುಗಳನ್ನು ಈ ಕೆಳಗೆ ತಿಳಿಸಲಾಗಿದೆ.

1. ದೈಹಿಕ ದುಷ್ಪರಿಣಾಮಗಳು

ವೇಗದ ಉಸಿರಾಟ, ವೇಗದ ನಾಡಿಬಡಿತ, ಅಧಿಕ ರಕ್ತದೊತ್ತಡ ಮತ್ತು ತಲೆನೋವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಒಂದುವೇಳೆ ಶಬ್ದವು ಜೋರಾಗಿದ್ದರೆ, ಜಠರದುರಿತ ಮತ್ತು ಹೃದಯಘಾತಗಳಂತಹ ಸಮಸ್ಯೆಗಳು ಎದುರಾಗುತ್ತವೆ.

2. ಮಾನಸಿಕ ದುಷ್ಪರಿಣಾಮಗಳು

ಶಬ್ದವು ಮಾನವರು ಮತ್ತು ಪ್ರಾಣಿಗಳಲ್ಲಿ, ಒತ್ತಡ, ಆಯಾಸ, ಖಿನ್ನತೆ, ಆತಂಕ ಮತ್ತು ಉನ್ಮಾದಗಳಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.

ಮಾನವರು ಮತ್ತು ಪ್ರಾಣಿಗಳು ತೀವ್ರವಾದ ಮತ್ತು ದೀರ್ಘಕಾಲದ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

3. ನಿದ್ರೆ ಮತ್ತು ನಡವಳಿಕೆಯ ಅಸ್ವಸ್ಥತೆಗಳು

45db ಗಳಿಗಿಂತ ಹೆಚ್ಚಿನ ಶಬ್ದವು ಸರಿಯಾಗಿ ನಿದ್ದೆ ಬಾರದಿರುವಿಕೆಗೆ ಕಾರಣವಾಗುತ್ತದೆ.

ಜೋರಾದ ಶಬ್ದವು ನಮ್ಮ ನಡವಳಿಕೆಯ ಮೇಲೆ ಸೂಪ್ತ ಪರಿಣಾಮವನ್ನು  ಬೀರಬಲ್ಲಬಹುದಲ್ಲದೆ, ಕೋಪ ಮತ್ತು ಕಿರಿಕಿರಿಗಳಂತಹ ನಡುವಳಿಕೆಳಿಗೆ ಕಾರಣವಾಗಬಹುದು.

4. ಜ್ಞಾಪಕ ಶಕ್ತಿ ಮತ್ತು ಏಕಾಗ್ರತೆ

ಶಬ್ದವು ಮನುಷ್ಯನ ಏಕಾಗ್ರತೆ ಸಾಮರ್ಥ್ಯಕ್ಕೆ ಧಕ್ಕೆ ಉಂಟುಮಾಡಬಹುದು. ಇದು ಕಾಲಾನಂತರದಲ್ಲಿ ಮೆದುಳಿನ ಕಡಿಮೆ ಕಾರ್ಯಕ್ಷಮತೆಗೆ ಕಾರಣವಾಗಬಹುದು.

ಕುತೂಹಲಕಾರಿ ವಿಷಯವೇನೆಂದರೆ, ನಮ್ಮ ಕಿವಿಗಳು ಸತತ 2 ಗಂಟೆಗಳ ಕಾಲ 100db ಶಬ್ದವನ್ನು ಕೇಳಿದ್ದಲ್ಲಿ, ನಾವು 16 ಗಂಟೆಗಳಿಗಿಂತ ಹೆಚ್ಚು ವಿಶ್ರಾಂತಿ ಕೊಡಬೇಕಾಗುತ್ತದೆ.

5. ಶ್ರವಣ ಸಮಸ್ಯೆಗಳು

ನಮ್ಮ ಕಿವಿಯಿಂದ ಶೋಧಿಸಲಾಗದ(Filter) ಯಾವುದೇ ಅನಗತ್ಯ ಶಬ್ದವು ನಮ್ಮ ಕಿವಿಗೆ ಹಾನಿಯನ್ನು ಉಂಟುಮಾಡಬಹುದು.

ನಮ್ಮ ಕಿವಿಗಳು ಹಾನಿಗೊಳಗಾಗಿದೆ ನಿರ್ದಿಷ್ಟ ಶ್ರೇಣಿಯ ಶಬ್ದಗಳನ್ನು ಮಾತ್ರ ಕೇಳಿಸಿಕೊಳ್ಳಬಲ್ಲವು.

ಮಾನವರ ಕಿವಿಗಳು 20Hz ನಿಂದ 20kHz ವರೆಗಿನ ಆವರ್ತನ(Frequency) ವ್ಯಾಪ್ತಿಯಲ್ಲಿ ಬರುವ ಶಬ್ದಗಳನ್ನು ಮಾತ್ರ ಸರಿಯಾಗಿ ಪತ್ತೆಹಚ್ಚುತ್ತವೆ. ಇದಕ್ಕಿಂತ ಹೆಚ್ಚು ಅಥವಾ ಕಡಿಮೆ ಆವರ್ತನದ ಶಬ್ದವು ಸರಿಯಾಗಿ ಕೇಳಿಸುವುದಿಲ್ಲ. 

ನಿರಂತರವಾಗಿ ಜೋರಾದ ಶಬ್ದಗಳಿಗೆ ಒಡ್ಡಿಕೊಳ್ಳುವುದರಿಂದ ನಮ್ಮ ಕಿವಿಯ ತಮಟೆ “Eardrum” ಹಾನಿಗೊಳಗಾಗಿ, ಶ್ರವಣ ಸಾಮರ್ಥ್ಯವು ಕಡಿಮೆಯಾಗಿ ಕಿವುಡುತನಕ್ಕೆ(Tinnitus) ಕಾರಣವಾಗುತ್ತದೆ.

6. ಸಂವಹನದಲ್ಲಿ ತೊಂದರೆ

ಹೆಚ್ಚಿನ ಡಿಸಿಬಲ್ ನ ಶಬ್ದವು ತೊಂದರೆಯನ್ನು ಉಂಟು ಮಾಡುವುದಲ್ಲದೇ, ಜನರ ನಡುವಿನ ಒಳ್ಳೆಯ ಸಂವಹನ(Communication) ದ ಮೇಲೆ ಪರಿಣಾಮ ಬೀರುತ್ತದೆ.

ಇದು ತಪ್ಪು ಗ್ರಹಿಕೆಗೆ ಕಾರಣವಾಗುವುದಲ್ಲದೆ ನೀವು ಇನ್ನೊಬ್ಬ ವ್ಯಕ್ತಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತದೆ.

ನಿರಂತರ ಹೆಚ್ಚಿನ ಶಬ್ದವು ತಲೆನೋವನ್ನು ನೀಡುವುದಲ್ಲದೆ ಭಾವನಾತ್ಮಕ ಸಮತೋಲನಕ್ಕೆ ಅಡ್ಡ ಪಡಿಸುತ್ತದೆ.

7. ವನ್ಯಜೀವಿಗಳ ಮೇಲೆ ಪರಿಣಾಮ

Biology Letters ನ ಇತ್ತೀಚಿನ ಅಧ್ಯಯನದ ಪ್ರಕಾರ, ಮಾನವನ ಚಟುವಟಿಕೆಗಳಿಂದ ಉಂಟಾದ ಶಬ್ದವು ಹಲವಾರು ಪ್ರಾಣಿಗಳ ಮೇಲೆ ಪರಿಣಾಮವನ್ನು ಬೀರುತ್ತದೆ.

ಶಬ್ದದ ಮೂಲಗಳು ಮೊದಲು ಮನೆಯಿಂದಲೇ ಆರಂಭವಾಗುತ್ತವೆ. ನಿರಂತರ ಶಬ್ದ ಇರುವ ಮನೆಗಳಲ್ಲಿ ಹಾಗೂ ಪ್ರಾಣಿಗಳು ಹೆಚ್ಚು ಆಕ್ರಮಣಕಾರಿಯಾಗಿ ಪ್ರತಿಕ್ರಿಯಿಸುತ್ತವೆ.

ಶಬ್ದ ಮಾಲಿನ್ಯದಿಂದ ಶ್ರವಣ ಸಾಮರ್ಥ್ಯವನ್ನು  ಕಡಿಮೆಯಾದ ಅಥವಾ ಕಳೆದುಕೊಂಡ ಪ್ರಾಣಿಗಳು ಪ್ರಕೃತಿಯಲ್ಲಿ ಬೇಗನೆ ಬೇಟೆಗೆ ಒಳಗಾಗುತ್ತವೆ ಮತ್ತು ಬೇಟೆಯಾಡುತ್ತಿರುವ ಪ್ರಾಣಿಯು ಬೇಟೆಯಾಡಲು ಅಸಮರ್ಥವಾಗುತ್ತದೆ. ಇದರಿಂದ ಪರಿಸರ ವ್ಯವಸ್ಥೆಯ ಸಮತೋಲನಕ್ಕೆ ತೊಂದರೆಯಾಗುತ್ತದೆ.

ಇಷ್ಟೆಲ್ಲಾ ನೋಡಿದ ಮೇಲೆ ನಮಗೆ ಕಾಡುವ ಪ್ರಶ್ನೆ ಏನಂದರೆ, ಈ ಶಬ್ದ ಮಾಲಿನ್ಯವನ್ನು ತಡೆಗಟ್ಟುವುದು ಹೇಗೆ?
ಬನ್ನಿ ನೋಡೋಣ


ಶಬ್ದ ಮಾಲಿನ್ಯವನ್ನು ನಿಯಂತ್ರಿಸುವ ಕ್ರಮಗಳು

ಶಬ್ದ ಮಾಲಿನ್ಯವನ್ನು ನಿಯಂತ್ರಿಸಲು ಸರ್ಕಾರವು ಈ ಕೆಳಗಿನ ರೀತಿಯಲ್ಲಿ ಸಹಾಯ ಮಾಡಬಹುದು.

  • ಶಬ್ದ ಮಾಲಿನ್ಯವನ್ನು ತಡೆಗಟ್ಟುವ ಕ್ರಮಗಳನ್ನು ಒಳಗೊಂಡಿರುವ ನಿಯಮಗಳನ್ನು ಜಾರಿಗೆ ತರುವುದು.
  • ಜನವಸತಿ ವಲಯ ಮತ್ತು ವಿಮಾನ ನಿಲ್ದಾಣ ಗಳಂತಹ ಶಬ್ದ ಮಾಲಿನ್ಯದ ಮೂಲಗಳನ್ನು ಬೇರ್ಪಡಿಸುವುದು.
  • ಶಬ್ದದ ಮಿತಿಗಳನ್ನು ಮೀರಿದವರಿಗೆ ದಂಡ ವಿಧಿಸುವುದು.
  • ಕ್ಲಬ್ಗಳಲ್ಲಿ, ಡಿಸ್ಕೋಗಳಲ್ಲಿ, ಬಾರ್ ಗಳಲ್ಲಿ ಮತ್ತು ಪಾರ್ಟಿಗಳಲ್ಲಿ ಧ್ವನಿ ಮಟ್ಟವನ್ನು ನಿಯಂತ್ರಿಸುವುದು.
  • ಸಾರ್ವಜನಿಕ ಧ್ವನಿವರ್ಧಕಗಳನ್ನು ತೆಗೆಯುವುದು.
  • ವಿದ್ಯುತ್ ಚಾಲಿತ ವಾಹನಗಳ ಖರೀದಿಗೆ ಪ್ರೇರೇಪಿಸುವುದು ಮತ್ತು ರಿಯಾಯಿತಿಯನ್ನು ನೀಡುವುದು.
  • ಸಾರ್ವಜನಿಕ ಸ್ಥಳಗಳಲ್ಲಿ ಅತಿಯಾದ ಶಬ್ದವನ್ನು ಸೀಮಿತಗೊಳಿಸುವುದು.

ಕರ್ನಾಟಕ ರಾಜ್ಯದ ಮಾಲಿನ್ಯ ನಿಯಂತ್ರಣ ಮಂಡಳಿಯ ಈ Videoವನ್ನೊಮ್ಮೆ ನೋಡಿ.

ವೈಯಕ್ತಿಕ ಮಟ್ಟದಲ್ಲಿ ಪ್ರತಿಯೊಬ್ಬರು ಈ ಕೆಳಗಿನ ರೀತಿಯಲ್ಲಿ ಶಬ್ದವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು.

  • ನಿಮ್ಮ ಮನೆಗಳಲ್ಲಿ ಟಿವಿ ಮತ್ತು ನಿಮ್ಮ Music System ನ Volume ಅನ್ನು ಕಡಿಮೆ ಮಾಡುವುದರ ಮೂಲಕ ಮನೆಗಳಲ್ಲಿ ಶಬ್ದವನ್ನು ಕಡಿಮೆ ಮಾಡಿ.
  • ತುಂಬಾ ಗದ್ದಲದ ಚಟುವಟಿಕೆಗಳನ್ನು ಕಡಿಮೆ ಮಾಡಿ ಮತ್ತು ತುಂಬಾ ಗದ್ದಲದ ಪ್ರದೇಶಗಳಿಗೆ ಹೋಗುವುದನ್ನು ತಪ್ಪಿಸಿ.
  • ಹೆಚ್ಚು ಶಬ್ದವನ್ನು ಮಾಡುವ ಯಂತ್ರಗಳಲ್ಲಿ ಸರಿಯಾದ ಶಬ್ದ ಹೀರಿಕೊಳ್ಳುವ ಯಂತ್ರವನ್ನು(Noise Absorbents) ಅಳವಡಿಸಿ.
  • ನೀವು ಗದ್ದಲದ ಪ್ರದೇಶದಲ್ಲಿ ಇದ್ದಾಗ ಇಯರ್ ಪ್ಲಗ್ಗಳನ್ನು ಬಳಸಿ ಏಕೆಂದರೆ ಇದು ಸುತ್ತಮುತ್ತಲಿನ ಶಬ್ದವನ್ನು ಕಡಿಮೆ ಮಾಡುತ್ತದೆ.
  • ನಿಮ್ಮ ವಾಹನಗಳನ್ನು ನಿಯಮಿತವಾಗಿ ಪರೀಕ್ಷಿಸಿ ಮತ್ತು ಅವುಗಳು ಹೆಚ್ಚು ಶಬ್ದವನ್ನು ಉತ್ಪಾದಿಸದಂತೆ Lubricant ಬಳಸಿ.
  • ನಿಮ್ಮದು ಹೊಸ ಕಟ್ಟಡ/ಮನೆಯಾದಲ್ಲಿ, ಶಬ್ದ ಹೀರಿಕೊಳ್ಳುವ ವಸ್ತುಗಳನ್ನು ಬಳಸುವುದರಿಂದ ನಿಮ್ಮ ಮನೆಯಲ್ಲಿ ಉಂಟಾಗುವ ಶಬ್ದ ಅಥವಾ ಪ್ರತಿಧ್ವನಿಯನ್ನು ಕಡಿಮೆಗೊಳಿಸಬಹುದು.
  • ನಿಮ್ಮ ಸುತ್ತಮುತ್ತಲಿನ ಶಬ್ದದ ಮಟ್ಟವನ್ನು ಪರೀಕ್ಷಿಸಿ ಮತ್ತು ನೀವ್ ಉತ್ಪಾದಿಸುವ ಶಬ್ದದ ಮಟ್ಟವನ್ನು ಮಿತಿಗೊಳಿಸಿಕೊಳ್ಳಿ.
  • ನಿಮ್ಮ ಮನೆಯ ಸುತ್ತಮುತ್ತ ಗಿಡಮರಗಳನ್ನು ಬೆಳೆಸಿಕೊಳ್ಳಿ ಅಥವಾ ಗಿಡಮರಗಳು ಇರುವ ಜಾಗದಲ್ಲಿ ಇರಿ. ಏಕೆಂದರೆ ಗಿಡಮರಗಳು 5db ದಿಂದ 10db ಶಬ್ದವನ್ನು ತಗ್ಗಿಸುತ್ತವೆ.

ಉಪಸಂಹಾರ:
ಪರಿಸರದಲ್ಲಿ ಹೆಚ್ಚುತ್ತಿರುವ ಶಬ್ದ ಮಾಲಿನ್ಯದ ಕಾರಣಗಳು, ಪರಿಣಾಮಗಳು ಮತ್ತು ಶಬ್ದ ಮಾಲಿನ್ಯ ತಡೆಗಟ್ಟುವುದು ಹೇಗೆ?, ಇವುಗಳೆಲ್ಲದರ  ಕುರಿತು ಜಾಗೃತಿ ಮೂಡಿಸುವುದು ತುರ್ತು ಅಗತ್ಯವಾಗಿದೆ.

ಶಬ್ದಮಾಲಿನ್ಯದ ಅಪಾಯಗಳ ಬಗ್ಗೆ ಜನರಿಗೆ ಶಿಕ್ಷಣ ನೀಡಬೇಕು. ಒಟ್ಟಾರೆಯಾಗಿ ಪರಿಸರ ಮಾಲಿನ್ಯವನ್ನು ತಡೆಗಟ್ಟುವುದು ಮತ್ತು ಭೂಮಿಯನ್ನು ವಾಸಿಸಲು ಉತ್ತಮ ಸ್ಥಳವನ್ನಾಗಿ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿಸಿಕೊಳ್ಳೋಣ.

ಅದಕ್ಕೆ, ಸರ್ಕಾರ ಮತ್ತು ಜನಸಾಮಾನ್ಯರೆಲ್ಲರೂ ಕೈಜೋಡಿಸಿ ಕಾರ್ಯಪ್ರವೃತ್ತರಾಗಬೇಕು. 

ಏನಂತೀರಾ?


ಶಬ್ದ ಮತ್ತು ಧ್ವನಿಯ ನಡುವಿನ ವ್ಯತ್ಯಾಸ

ಧ್ವನಿಶಬ್ದ
ಕೇಳಲು ಆಹ್ಲಾದಕರವಾದದ್ದುಕಿವಿಗೆ ಅಹಿತಕರವಾದದ್ದು
ಅರ್ಥಪೂರ್ಣ ಸಂವಹನಕ್ಕೆ ಕಾರಣವಾಗುತ್ತದೆ.ಅರ್ಥಹೀನ ಸಂವಹನದ ಉತ್ಪಾದನೆ
ನಿಯಮಿತ ಆವರ್ತಕ ಚಲನೆಯನ್ನು ಹೊಂದಿದೆ.ಅನಿಯಮಿತ ಆವರ್ತಕಗಳ ಚಲನೆ.
ಅಳೆಯುವ ಏಕಮಾನ Hzಅಳೆಯುವ ಏಕಮಾನ dB

FAQ On Noise Pollution In Kannada

ಮಾನವರಲ್ಲಿ ಶಬ್ದ ಉತ್ಪತ್ತಿಯಾಗಲು ಯಾವ ಅಂಗ ಕಾರಣವಾಗುತ್ತದೆ?

ಧ್ವನಿಪೆಟ್ಟಿಗೆ(Larynx).

ಶಬ್ದವು ಗಾಳಿಗಿಂತ ನೀರಿನಲ್ಲಿ ಏಕೆ ವೇಗವಾಗಿ ಚಲಿಸುತ್ತದೆ?

ನೀರಿನಲ್ಲಿ ಶಬ್ದವು ಗಾಳಿಗಿಂತ ವೇಗವಾಗಿ ಚಲಿಸುತ್ತದೆ ಏಕೆಂದರೆ, ನೀರಿನಲ್ಲಿ ಅಣುಗಳು ಗಾಳಿಗಿಂತ ಹೆಚ್ಚು ಹತ್ತಿರದಲ್ಲಿರುತ್ತವೆ.

ಆದ್ದರಿಂದ ಒಂದು ಕಣದಿಂದ ಇನ್ನೊಂದು ಕಣಕ್ಕೆ ಕಂಪನ ಶಕ್ತಿಯನ್ನು(Vibration Energy) ತುಂಬಾ ವೇಗವಾಗಿ ರವಾನಿಸುತ್ತವೆ. ಸಾಮಾನ್ಯವಾಗಿ ಶಬ್ದವು ಗಾಳಿಗಿಂತ ನಾಲ್ಕು ಪಟ್ಟು ವೇಗವಾಗಿ ನೀರಿನಲ್ಲಿ ಚಲಿಸುತ್ತದೆ.

ನಮ್ಮ ಈ “Noise Pollution In Kannada” Essay ಲೇಖನ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ.

ಈ ಲೇಖನದ ಕುರಿತು ನಿಮ್ಮ ಅಭಿಪ್ರಾಯ ಮತ್ತು ಸಲಹೆ, ಸೂಚನೆಗಳೇನಾದರೂ ಇದ್ದರೆ, ದಯವಿಟ್ಟು Comment ಮಾಡಿ.

ಓದಿ: ಜಲ ಮಾಲಿನ್ಯ ಪ್ರಬಂಧ

ಓದಿ: ವಾಯು ಮಾಲಿನ್ಯ ಕುರಿತು ಪ್ರಬಂಧ

Sources – ಮಾಹಿತಿಯ ಮೂಲಗಳು
1.Solutions of Noise Pollution by Iberdrola
2.Causes and Effect of Noise Pollution by Conserve Energy Future

ಈ ಪ್ರಬಂಧ ವಿಷಯವು ನಿಮಗೆ ಸಹಾಯ ಮಾಡಿದ್ದರೆ, ನೀವು ನಿಮ್ಮ ಸ್ನೇಹಿತರಿಗೆ kseebsolutionsfor.com ಅನ್ನು ಸಹ ಹಂಚಿಕೊಳ್ಳಬಹುದು.

ಶುಭವಾಗಲಿ !!

Leave a Comment

Your email address will not be published. Required fields are marked *